ಚಿತ್ರ: ಜೊತೆ ಜೊತೆಯಲಿ
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್
ಸಂಗೀತ: ಹರಿಕೃಷ್ಣ
ಗಾಯನ: ಬಿ. ಜಯಶ್ರೀ

ಸುಮ್ಮನೆ ಸುಮ್ಮನೆ
ಇದ್ದರೂ ಸುಮ್ಮನೆ
ಪ್ರಾಣಾ ತಿಂತಾನೆ
ಪ್ರೀತೀಲಿ ಗಿಲ್ತಾನೆ!

ನಖರ ನಖರ
ಶ್ಯಾನೆ ನಖರ
ನಂಗೂ ಇಷ್ಟಾನೆ
ನಾನು ಸೀರೆ ನೆರಿಗೆ
ಹಾಕುವ ಗಳಿಗೆ
ಬರ್ತಾನೆ ಬಳಿಗೆ
ಆಮೇಲೆ ಅಮ್ಮಮ್ಮಮ್ಮ!
ಯಾವ ಸೀಮೆ ಹುಡುಗ 
ತುಂತಾಟವಾಡದೆ
ನಿದ್ದೆನೆ ಬರದೆ
ಅಬ್ಬಬ್ಬಾಬ್ಬಾ!

ಸುಮ್ಮನೆ ಸುಮ್ಮನೆ
ಇದ್ದರೂ ಸುಮ್ಮನೆ
ಪ್ರಾಣಾ ತಿಂತಾನೆ
ಪ್ರೀತೀಲಿ ಗಿಲ್ತಾನೆ!

ತಂಗಾಳಿಗು..
ಅಂಗೈಇಗೂ
ಗೋರಂಟಿಯ ಹಾಕುವ
ಯಾಮಾರಿಸೀ..
ಕೈಸೋಕಿಸಿ..
ಕಳ್ಳಾಟವ ಆಡುವ

ನಿನ್ನ ಕಣ್ಣಲಿ.. ದೂಳು ಇದೆ
ಎಂದು ನೆಪ ಹೇಳುತಾ
ನನ ಕಣ್ಣಲೀ.. ಕಣ್ಣಿಟನು
ತುಟಿ ಅಂಚನು ತಾಕುತಾ..

ನಾನು ನೋವು ಅಂದರೆ..
ಕಣ್ಣೀರು ಹಾಕುವ
ನೋವೆಲ್ಲ ನುಕುವ
ಧೈರ್ಯಾನ ಹೇಳುವ..
ಮಾತು ಮಾತು ಸರಸ
ಒಂಚೂರು ವಿರಸ
ಎಲ್ಲೋದ ಅರಸ?
ಅಳ್ತಾನೆ ಮನಸಾ!

ಸುಮ್ಮನೆ ಸುಮ್ಮನೆ
ಇದ್ದರೂ ಸುಮ್ಮನೆ
ಪ್ರಾಣಾ ತಿಂತಾನೆ
ಪ್ರೀತೀಲಿ ಗಿಲ್ತಾನೆ!

ಮುಂಜಾನೆಯ.. ಮೊಗ್ಗೆಲವ..
ಸೂರಯಾನೆ ಹೂ ಮಾಡುವ
ಈ ಹುಡುಗಿಯಾ ಹೆಣ್ಣಗಿಸೊ ಜಾದುಗಾರ ಇವ
ಓ.. ಓ!
ಮುಸ್ಸಂಜೆಯ.. ದೀಪಾ ಇವ
ಮನೆ ಮನಾ ಬೆಳಗುವ
ಸದ್ದಿಲ್ಲದ ಗುಡುಗು ಇವ
ನನ್ನೊಳಗೆ ಮಳೆಯಾಗುವ!

ಪ್ರೀತಿಯೊಂದೆ ನಂಬಿಕೆ
ಎದೆಯಾನೆ ಕಾಣಿಕೆ
ಅನ್ನೊದು ವಡಿಕೆ
ಅದಕಿರದೆ ಹೋಲಿಕೆ?
ಏಳು ಏಳು ಜನುಮ 
ಇವನಿಂದ ನೀಯಮ್ಮ
ಆಗುತ್ತಾ ಬಾಳಮ್ಮ 
ಅಂದೋನು ಆ ಬ್ರಹ್ಮ!

ಸುಮ್ಮನೆ ಸುಮ್ಮನೆ
ಇದ್ದರೂ ಸುಮ್ಮನೆ
ಪ್ರಾಣಾ ತಿಂತಾನೆ
ಪ್ರೀತೀಲಿ ಗಿಲ್ತಾನೆ!

Category: ಕನ್ನಡ ಚಿತ್ರಸಾಹಿತ್ಯ
Category: ಜೊತೆ ಜೊತೆಯಲಿ ಚಿತ್ರ
Category: ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ